1 ಅರಸುಗಳು 3 : 1 (KNV)
ಸೊಲೊಮೋನನು ಐಗುಪ್ತದ ಅರಸ ನಾದ ಫರೋಹನ ಸಂಗಡ ಬಂಧುತ್ವ ಮಾಡಿ ಫರೋಹನ ಮಗಳನ್ನು ತಕ್ಕೊಂಡನು. ಅವನು ತನ್ನ ಮನೆಯನ್ನೂ ಕರ್ತನ ಆಲಯವನ್ನೂ ಯೆರೂಸ ಲೇಮಿಗೆ ಸುತ್ತಲೂ ಗೋಡೆಯನ್ನೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
1 ಅರಸುಗಳು 3 : 2 (KNV)
ಆದರೆ ಆ ಕಾಲದ ವರೆಗೂ ಕರ್ತನ ಹೆಸರಿಗೆ ಆಲಯ ಕಟ್ಟಲ್ಪಡದೆ ಇದ್ದದರಿಂದ ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.
1 ಅರಸುಗಳು 3 : 3 (KNV)
ಸೊಲೊ ಮೋನನು ಕರ್ತನನ್ನು ಪ್ರೀತಿಮಾಡಿ ತನ್ನ ತಂದೆ ಯಾದ ದಾವೀದನ ಕಟ್ಟಳೆಗಳಲ್ಲಿ ನಡೆಯುತ್ತಾ ಇದ್ದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದನು.
1 ಅರಸುಗಳು 3 : 4 (KNV)
ಗಿಬ್ಯೋನು ದೊಡ್ಡ ಎತ್ತರದ ಸ್ಥಳ; ಆದದರಿಂದ ಅರಸನು ಯಜ್ಞವನ್ನರ್ಪಿಸಲು ಅಲ್ಲಿಗೆ ಹೋಗಿ ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.
1 ಅರಸುಗಳು 3 : 5 (KNV)
ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿ ಯಲ್ಲಿ ಸ್ವಪ್ನದೊಳಗೆ ಕರ್ತನು ಸೊಲೊಮೋನನಿಗೆ ಕಾಣಿಸಿಕೊಂಡನು. ದೇವರು ಅವನಿಗೆ--ನಾನು ನಿನಗೆ ಏನು ಕೊಡಬೇಕು ಕೇಳಿಕೋ ಅಂದನು.
1 ಅರಸುಗಳು 3 : 6 (KNV)
ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ.
1 ಅರಸುಗಳು 3 : 7 (KNV)
ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ.
1 ಅರಸುಗಳು 3 : 8 (KNV)
ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು.
1 ಅರಸುಗಳು 3 : 9 (KNV)
ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.
1 ಅರಸುಗಳು 3 : 10 (KNV)
ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು.
1 ಅರಸುಗಳು 3 : 11 (KNV)
ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ
1 ಅರಸುಗಳು 3 : 12 (KNV)
ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.
1 ಅರಸುಗಳು 3 : 13 (KNV)
ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ.
1 ಅರಸುಗಳು 3 : 14 (KNV)
ನೀನು ನಿನ್ನ ತಂದೆಯಾದ ದಾವೀದನು ನಡೆದ ಪ್ರಕಾರ ನನ್ನ ಮಾರ್ಗಗಳಲ್ಲಿ ನಡೆದು ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡರೆ ನಿನ್ನ ದಿವಸಗಳನ್ನು ಹೆಚ್ಚಿಸುವೆನು ಅಂದನು.
1 ಅರಸುಗಳು 3 : 15 (KNV)
ಆಗ ಸೊಲೊಮೋನನು ಎಚ್ಚತ್ತಾಗ ಇಗೋ, ಅದು ಸ್ವಪ್ನವಾಗಿತ್ತು, ಅವನು ಯೆರೂ ಸಲೇಮಿಗೆ ಬಂದು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತನ್ನ ಸೇವಕರಿಗೆ ಔತಣ ಮಾಡಿಸಿದನು.
1 ಅರಸುಗಳು 3 : 16 (KNV)
ತರುವಾಯ ಇಬ್ಬರು ವೇಶ್ಯಾಸ್ತ್ರೀಯರು ಅರಸನ ಬಳಿಗೆ ಬಂದು ಅವನ ಮುಂದೆ ನಿಂತರು.
1 ಅರಸುಗಳು 3 : 17 (KNV)
ಅವರಲ್ಲಿ ಒಬ್ಬಳು--ಓ ನನ್ನ ಒಡೆಯನೇ, ನಾನೂ ಈ ಹೆಂಗಸೂ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.
1 ಅರಸುಗಳು 3 : 18 (KNV)
ನಾನು ಅವಳ ಸಂಗಡ ಮನೆಯಲ್ಲಿರುವಾಗ ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ ಈ ಹೆಂಗಸು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು.
1 ಅರಸುಗಳು 3 : 19 (KNV)
ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತಾರೂ ಇಲ್ಲ. ಆದರೆ ಅವಳು ಅದರ ಮೇಲೆ ಹೊರಳಿದ್ದರಿಂದ ರಾತ್ರಿಯಲ್ಲಿ ಈ ಹೆಂಗಸಿನ ಮಗುವು ಸತ್ತು ಹೋಯಿತು.
1 ಅರಸುಗಳು 3 : 20 (KNV)
ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.
1 ಅರಸುಗಳು 3 : 21 (KNV)
ಉದಯದಲ್ಲಿ ನನ್ನ ಕೂಸಿಗೆ ಮೊಲೆ ಕೊಡಲು ಎದ್ದಾಗ ಇಗೋ, ಅದು ಸತ್ತಿತ್ತು. ಉದಯದಲ್ಲಿ ಅದನ್ನು ಯೋಚಿಸಿದಾಗ ಇಗೋ, ಅದು ನಾನು ಹೆತ್ತ ಮಗುವಾಗಿದ್ದಿಲ್ಲ ಅಂದಳು.
1 ಅರಸುಗಳು 3 : 22 (KNV)
ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು.
1 ಅರಸುಗಳು 3 : 23 (KNV)
ಆಗ ಅರಸನುಇವಳು--ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅನ್ನುತ್ತಾಳೆ. ಅವಳು--ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅನ್ನುತ್ತಾಳೆ ಎಂದು ಹೇಳಿ
1 ಅರಸುಗಳು 3 : 24 (KNV)
ಅರಸನು--ಕತ್ತಿಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದನು. ಅವರು ಕತ್ತಿಯನ್ನು ಅರಸನ ಬಳಿಗೆ ತಂದರು.
1 ಅರಸುಗಳು 3 : 25 (KNV)
ಆಗ ಅರಸನುಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು ಇವಳಿಗೆ ಅರ್ಧಪಾಲನ್ನು ಅವಳಿಗೆ ಅರ್ಧ ಪಾಲನ್ನು ಕೊಡಿರಿ ಅಂದನು.
1 ಅರಸುಗಳು 3 : 26 (KNV)
ಆಗ ಬದುಕಿರುವ ಕೂಸಿನ ತಾಯಿಯಾದವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ--ಓ ನನ್ನ ಒಡೆ ಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು; ಕೊಲ್ಲಲ್ಲೇ ಬೇಡ ಅಂದಳು. ಆದರೆ ಮತ್ತೊಬ್ಬಳು--ಅದು ನನ್ನದಾಗಲಿ ನಿನ್ನದಾಗಲಿ ಆಗಿರಬಾರದು; ಕಡಿ ಯಿರಿ ಅಂದಳು.
1 ಅರಸುಗಳು 3 : 27 (KNV)
ಆಗ ಅರಸನು ಪ್ರತ್ಯುತ್ತರವಾಗಿಬದುಕಿರುವ ಕೂಸನ್ನು ಇವಳಿಗೆ ಕೊಡಿರಿ; ಕೊಲ್ಲ ಬೇಡಿರಿ; ಇವಳೇ ಅದರ ತಾಯಿ ಅಂದನು.
1 ಅರಸುಗಳು 3 : 28 (KNV)
ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28